ಅದಿತಿ ಆರ್ಯ (ಜನನ ೧೮ ಸೆಪ್ಟೆಂಬರ್ ೧೯೯೪) ಒಬ್ಬ ಭಾರತೀಯ ನಟಿ, ರೂಪದರ್ಶಿ, ಸಂಶೋಧನಾ ವಿಶ್ಲೇಷಕ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಇವರು ೨೦೧೫ ರಲ್ಲಿ ಫೆಮಿನಾ ಮಿಸ್ ಇಂಡಿಯಾ ವಿಶ್ವ ಕಿರೀಟವನ್ನು ಪಡೆದರು. ೨0೧೫ ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು. == ಆರಂಭಿಕ ಜೀವನ == ಆರ್ಯ ಗುರಗಾಂವ್ ಗೆ ತೆರಳುವ ಮೊದಲು ತನ್ನ ಆರಂಭಿಕ ವರ್ಷಗಳಲ್ಲಿ ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅಮಿಟಿ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಇವರು ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬಿಸಿನೆಸ್ ಸ್ಟಡೀಸ್‌ನಿಂದ ವ್ಯವಹಾರ ಅಧ್ಯಯನದಲ್ಲಿ ಹಣಕಾಸು ಮೇಜರ್ ಜೊತೆ ಪದವಿ ಮುಗಿಸಿದರು. == ಫೆಮಿನಾ ಮಿಸ್ ಇಂಡಿಯಾ ೨೦೧೫ == ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಅದಿತಿ ಎಫ್‌ಬಿಬಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ೨೦೧೫ ರ ವಿಜೇತರಾಗಿ ಕಿರೀಟವನ್ನು ಪಡೆದರು. == ವಿಶ್ವ ಸುಂದರಿ ೨೦೧೫ == ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ೨೦೧೫ ಪ್ರಶಸ್ತಿಯನ್ನು ಗೆದ್ದ ನಂತರ ಮಿಸ್ ವರ್ಲ್ಡ್ ಸ್ಪರ್ಧೆಯ ೬೫ ನೇ ಆವೃತ್ತಿಯ ಮಿಸ್ ವರ್ಲ್ಡ್ ೨೦೧೫ ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಉಪ ಸ್ಪರ್ಧೆಗಳಲ್ಲಿ ಮಲ್ಟಿಮೀಡಿಯಾ ಪ್ರಶಸ್ತಿಯಲ್ಲಿ ಟಾಪ್ ೫, ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಟಾಪ್ ೫, ವಿಶ್ವ ಫ್ಯಾಶನ್ ಡಿಸೈನರ್ ಡ್ರೆಸ್ ಅವಾರ್ಡ್‌ನಲ್ಲಿ ಟಾಪ್ ೧೦, ಬ್ಯೂಟಿ ವಿಥ್ ಎ ಪರ್ಪಸ್ ಅವಾರ್ಡ್‌ನಲ್ಲಿ ಟಾಪ್ ೨೫, ಟ್ಯಾಲೆಂಟ್ ಉಪ ಸ್ಪರ್ಧೆಯಲ್ಲಿ ಟಾಪ್ ೩೦ ಮತ್ತು ಟಾಪ್ ಮಾಡೆಲ್‌ನಲ್ಲಿ ಟಾಪ್ ೩೦ ಸ್ಥಾನ ಪಡೆದರು. == ನಟನಾ ವೃತ್ತಿ == ಫೆಮಿನಾ ಮಿಸ್ ಇಂಡಿಯಾ ೨೦೧೫ ರ ಕಿರೀಟವನ್ನು ಪಡೆದ ನಂತರ ಅದಿತಿ ಆರ್ಯ ಅವರು ಟಾಲಿವುಡ್‌ಗೆ ನಾಯಕಿಯಾಗಿ ಮುಖ್ಯ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಪುರಿ ಜಗನ್ನಾಥ್ ಅವರ ಚಿತ್ರ ನಂದಮುರಿ ಕಲ್ಯಾಣ್ ರಾಮ್ ಅವರೊಂದಿಗೆ ಇಸ್ಮ್. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತು ಮತ್ತು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ನಂತರ ೩ಡಿ ಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮ್ಯಾಗ್ನಮ್ ಓಪಸ್ ಕುರುಕ್ಷೇತ್ರದಲ್ಲಿ ಇವರು ಉತ್ತರೆಯ ಪಾತ್ರದಲ್ಲಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಸಿದ್ದಾಂತ್ ಸಚ್‌ದೇವ್ ನಿರ್ದೇಶನದ ಮತ್ತು ವಿಕ್ರಮ್ ಭಟ್ ನಿರ್ಮಿಸಿದ ೩೬ ಸಂಚಿಕೆಗಳ ಹಿಂದಿ ವೆಬ್ ಸೀರಿಸ್ ತಂತ್ರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ತಂಡದೊಂದಿಗೆ ಸ್ಪಾಟ್ಲೈಟ್ ೨ ಎಂಬ ಮತ್ತೊಂದು ವೆಬ್ ಸೀರಿಸನ್ನು ಸಹ ಅವರು ಮಾಡಿದ್ದಾರೆ. == ಚಿತ್ರಕಥೆ == == ಉಲ್ಲೇಖಗಳು ==